Thursday, October 13, 2011

The Moment

August 2010, after struggling a lot with myself, I decided that I got to stand for my family, specially for my mom. Nothing is worth than the smile on her face. I decided that I should go for my mom. Oct 17th 2010 with masked face & fake smile, which was unmasked shortly, here goes the story. This is for us on the eve of a year knowing each other:)


Part 1
ನನಗೆ ಅಂತ ನಾನು ಏನಾದ್ರು ಕೇಳ್ಕೊಂಡಿದ್ದೀನಿ  ಅಂದ್ರೆ - ಅರ್ಥ ಮಾಡ್ಕೊಳೋ ಹುಡುಗಿ ನನ್ನ ಕೈ ಹಿಡಿಬೇಕು, ಮನೇಲಿ ಯಾವಾಗಲು ನಗ್ತಾ, ಎಲ್ಲರನ್ನು ನಗಿಸ್ತ, ನನ್ನ ಬೆಸ್ಟ್ ಫ್ರೆಂಡ್ ಆಗಿರಬೇಕು ಅಂತ. ಮನೇಲಿ ನನಗೆ ಹುಡುಗಿನ ಹುಡುಕೋಕೆ ಶುರು ಮಾಡಿದ್ರು. ಎಲ್ಲೋ ಹುಟ್ಟಿ, ಎಲ್ಲೋ ಬೆಳೆದು, ನನ್ನವಳು ಹೇಗಿರ್ತಾಳೋ ........ ಮಳೆ ಜೊತೆ ಆಟಾಡ್ಬೇಕು, ವಟ ವಟ ಅಂತ ಮಾತಾಡಬೇಕು, ಪುಟ್ಟ ಮಗು ಥರ smile ಕೊಟ್ರೆ ಏನೇ tension ಇದ್ರು ಮರ್ತೋಗ್ಬೇಕು, ತುಂಬಾ responsible ಆಗಿರಬೇಕು, more than that ನಾನು ನಾನಾಗೆ ಇರಬೇಕು ( ಅಂದ್ರೆ ನಾನು ಹೇಗಿರ್ತೀನೋ ಹಾಗೆ accept ಮಾಡ್ಬೇಕು ) ....  ಹಾಗೆ ಏನೆಲ್ಲಾ ಯೋಚನೆ ಮಾಡ್ಕೊಂಡು; ಅಕ್ಟೋಬರ್ 17 ಸುಮಾರು 3:45 ಮಧ್ಯಾಹ್ನ ಹುಡುಗಿನ ನೋಡೋಕೆ ಅಮ್ಮ, ಮಾಮ, ನಾನು ಹೋಗಿದ್ವಿ. ನಾನು black shirt, light blue jeans ಹಾಕೊಂಡಿದ್ದೆ. ಅದು ಅವಳ relative ಮನೆ. ಅವಳ uncle ನಮಗೆಲ್ಲ greeting ಹೇಳಿ ಒಳಾಗಡೆ ಕರೆದರು. ಅಮ್ಮ, ಮಾಮ ದಿವಾನ ಮೇಲೆ ಕೂತ್ಕೊಂಡ್ರು, ನಾನು opposite ನಲ್ಲಿ ಇದ್ದ chair ಮೇಲೆ ಕೂತ್ಕೊಂಡೆ. ಇಲ್ಲೇ ದೀವಾನದ ಮೇಲೆ ಕೂತ್ಕೋಳಿ ಅಂತ ಮಧು ಅಂಕಲ್ ನನಗೆ ಹೇಳಿದ್ರು ಆಮೇಲೆ as expected ನಾನು ಏನು ಓದಿರೋದು, ಏನು ಕೆಲಸ ಅಂತ ಕೇಳ್ತಿದ್ರು. ಎಲ್ಲಾರು casual ಆಗಿ ಮಾತಾಡ್ತಿದ್ರು, ಆದ್ರೆ ನನ್ನ ಮನಸ್ಸು ಮಾತ್ರ ಅವಳನ್ನ ಹುಡುಕ್ತಾಯಿತ್ತು. ಅಮ್ಮ ನನ್ನ ಮನಸ್ಸು ಅರ್ಥ ಮಾಡ್ಕೊಂಡ್ರು ಅನ್ಸತ್ತೆ, ಸ್ವಲ್ಪ ನೀರು ಕೊಡಿ ಅಂತ ಅವಳ uncle -ನ  ಕೇಳೇ ಬಿಟ್ರು :) ...... Uncle ಕೂಡ ನೀರು ತರೋಕೆ ಹೇಳಿದ್ರು. Bad luck  :( ... ನೀರು ಏನೋ ಬಂತು ಆದ್ರೆ ತಂದಿದ್ದು ಅವಳ aunty :( .... ಬೇಗ ಬಾರಮ್ಮ ಅಂತ ನಾನು ಮನಸ್ಸಿನಲ್ಲೇ ಅಂದ್ಕೋತಿದ್ದೆ. Violet shade saree, neatly dressed with matching lipstick .. there she comes with sweets in her hand. ಮೊದಲು ತುಂಬಾ ಹುಡುಗೀನ ನೋಡಿದ್ದೆ ಆದರೆ she could be mine ಅಂತ ಯಾರನ್ನು ನೋಡಿ ಅನ್ಸಿರ್ಲಿಲ್ಲ. ಮೊದಲು ಅಮ್ಮನಿಗೆ sweet ಕೊಟ್ಳು, ಆಮೇಲೆ ಮಾಮನಿಗೆ ಕೊಟ್ಳು. ನಾನು ಮಾತ್ರ ಅವಳನ್ನೇ ನೋಡ್ತಿದ್ದೆ. It was my turn to take the sweets. ತಗೊಬೇಕಾದ್ರೆ ಅವಳನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡ್ಬೇಕು ಅನ್ಕೊಂಡೆ ಆದರೆ ಅವಳು ನನ್ನ ನೋಡಲೇ ಇಲ್ಲ. Shyish ಅಥವ ಭಯ ಅನ್ಸತ್ತೆ ಅವಳಿಗೆ [which I like :)]. Sweets  ಕೊಟ್ಟು ಒಳಾಗಡೆ ಹೋಗ್ತಿದ್ಲು. ಇನೊಂದ್ಸಲ ನೋಡ್ಬೇಕು ಅನ್ನಿಸ್ತಿತ್ತು. ಮಾತಾಡ್ತಾ ಮಾತಾಡ್ತಾ ಹಾಗೆ ಅವಳನ್ನ ನೋಡೋಕೆ ತಿರುಗಿದೆ. ಆದರೆ ಕಾಣಿಸಿದ್ದು ಅವಳ ಸೊಂಟ :) ... though not my intention it just happened ... ಹೊಟ್ಟೆ ಸ್ವಲ್ಪ ಮುಂದೆ ಬಂದಿತ್ತು ... ಮನಸ್ಸಿನಲ್ಲೇ ಡುಮ್ಮಿ ಅನ್ಕೊಂಡೆ :) bossy bossy type ಹುಡುಗಿಅನ್ಕೊಂಡೆ :). ಅವಳ aunty ಬಂದು ನಮ್ಮ ಜೊತೆ ಕೂತ್ಕೊಂಡ್ರು. ಅಮ್ಮನ್ನ ನೋಡಿ ಇವರು ನಿಮ್ಮ ಅಕ್ಕಾನ ಅಂತ ನನ್ನ ಕೇಳಿದ್ರು :) ... ಎಲ್ಲ ನಗ್ತಿದ್ರು :) ...  ಇಲ್ಲ aunty ಅವರು ನನ್ನ ಅಮ್ಮ ಅಂತ ಹೇಳಿದಾಗ ಪಾಪ sorry ಕೇಳಿದ್ರು :). sorry ಯಾಕೆ aunty ಅದು compliment ಅಂತ ಹೇಳಿದೆ :). ಅವಳ uncle ಅವಳಿಗೆ ಬಾರಮ್ಮ ಕೂತ್ಕೋ ಅಂತ ಹೇಳಿದ್ರು. ನನಗು ಅದೇ ಬೇಕಾಗಿತ್ತು - ಸರಿಯಾಗಿ ಇನ್ನೊಂದು ಸಲ ನೋಡ್ಬೇಕು ಅನ್ನಿಸ್ತಿತ್ತು. ಅವಳು ಬಂದು ನಾ first ಕೂತಿದ್ದ chair ಮೇಲೆ ಕೂತ್ಕೊಂಡ್ಳು. ಅವಳನ್ನೇ ನೋಡ್ತಿದ್ದೆ. she could be mine ಅನ್ನಿಸ್ತು. ಆದರೆ ಮಾತಾಡದೆ, ಅವಳ ಬಗ್ಗೆ ತಿಳ್ಕೊಲ್ದೆ, ನನ್ನ ಬಗ್ಗೆ ಅವಳು ತಿಳ್ಕೊಲ್ದೆ decision ತಗೋಳೋದು ಸರಿಯಲ್ಲ. ಅಷ್ಟರಲ್ಲಿ coffee ಕೂಡ ಬಂತು. ಅವಳ ಹತ್ರ ಮಾತಾಡಬೇಕು ಅನ್ನಿಸ್ತಿತ್ತು. ಮಾಮಗೆ ಹೇಳಿದೆ, ಮಾಮ ಅವಳ uncle ನ ಕೇಳಿದರು. ಅವರೆಲ್ಲ ಕೂಡ ಒಪ್ಕೊಂಡ್ರು.

Me: Hi. I am Praveen
She: Hiiiiiiiii [girls usually has this way to extend every word :)]. I am Madhura.
She has a sweet voice. 
Me: ನಿನಗೆ ಹುಡುಗನ್ನ ನೋಡ್ತಿರೋದು ಇಷ್ಟ ಇದೆಯಾ ಅಥವಾ force ಏನಾದ್ರು ಇದ್ಯಾ?
She: ಹಾಗೇನು ಇಲ್ಲ. ನನಗೆ ಇಷ್ಟ ಇದೆ. ನಿಮಗೆ?
Me: ನಂಗು ಕೂಡ ಇಷ್ಟ ಇದೆ :). hey ನೀನು ನನ್ನ ಹೋಗೋ ಬಾರೋ ಅಂತ ಕರೀಬಹುದು. ಹೋಗಿ, ಬನ್ನಿ ಅಂತ formalities ಬೇಡ. ಏನು ಓದಿರೋದು ನೀನು.
She: BBM ಮಾಡಿದೀನಿ. ನೀವು?
Me: Hey please don't be so formal ಆಯ್ತಾ. ನಾನು BE in CS. Kumar uncle ಹೇಳಿದ್ರು ನೀನು ಕೆಲಸ ಮಾಡ್ತಿದ್ಯಾ ಅಂತ. ಎಲ್ಲಿ ಕೆಲಸ ಮಾಡ್ತಿರೋದು?
She: Regaalis ಅನ್ನೋ ಹೋಟೆಲ್ ನಲ್ಲಿ finance related things handle ಮಾಡ್ತೀನಿ. ಅಂದ್ರೆ accounts related, income tax related ಎಲ್ಲ ನೋಡ್ಕೋತೀನಿ.
Seriously I didn't know what is that. I was just nodding my head :)
Me: ಮದ್ವೆ ಅದ್ಮೇಲು ಕೆಲಸ ಮಾಡ್ತೀಯ?
She: ನನಗೆ ಮಾಡಬೇಕು ಅಂತ ಇಷ್ಟ. ನಿನಗೆ ಹೇಗಿರಬೇಕು?
She is getting used to talk in ಹೋಗೋ ಬಾರೋ language :)
Me: ನನಗೆ ಹೋಗಲೇ ಬೇಕು ಅಂತ ಏನು ಇಲ್ಲ, ಆದರೆ ಹೋದ್ರೆ ಒಳ್ಳೇದು. She knows how to handle herself, be idependent, get to know how to deal with people etc etc. [Frankly speaking I didn't know why I was telling this to her. But, I didn't want someone to suffer like my mom, who has very little knowledge on dealing with people outside the world. She never got a chance to interact with people and she has suffered a lot because of that.] Studies ಎಲ್ಲ ಸೋಮವಾರಪೇಟೆ ನಲ್ಲೆ ಮಾಡಿದ್ದ ?
She: ಹಾ ಎಲ್ಲ ಅಲ್ಲೇ ಮಾಡಿದ್ದು.
She was just answering to my questions and there was no questions from her end. Thinking she might be nervous I asked her
Me: Nervous ಆಗಿದ್ಯಾ?
She: ಇಲ್ಲಪ್ಪ .. with a smile.
She looks beautiful while smiling. Perfect smile of my imagination - ಎಲ್ಲ ಬೇಜಾರು ಹೋಗ್ಸೋ ಅಂತ smile.
Me: ಅದು ಸರಿ. ಮಡಿಕೇರಿ ಕಡೆ ಹುಡ್ಗೀರಿಗೆ nervousness ಅನ್ನೋದೇ ಗೊತ್ತಿರಲ್ಲ :). ಈ ಮಾಡುವೆ ಇಂದ ನಿನಗೆ ಏನಾದ್ರು expectations ಇದೆಯಾ?
She: Expectations ಏನು ಇಲ್ಲ. ಆದರೆ ನಮ್ಮ family ತುಂಬಾ poor family. So, grand ಆಗಿ ಏನು ಮದುವೆ ಮಾಡ್ಕೋಡೋಕೆ  ಆಗಲ್ಲ.
Me: ಅದು ಎಲ್ಲ ಗೊತ್ತಿದೆ. ಅದರ ಬಗ್ಗೆ ಏನು ಯೋಚನೆ ಮಾಡಬೇಡ. ಅದು ಬಿಟ್ಟು personal ಆಗಿ ನಿನಗೆ ಅಂತ ಏನಾದ್ರು expectations ಇದೆಯಾ?
She: ಇಲ್ಲ. ಅಷ್ಟು ಬಿಟ್ರೆ ಬೇರೇನೂ ಇಲ್ಲ. ನಿನಗೆ ಏನು expectations ಇದೆ?
Me: ನನ್ನ expectations ಅಂದ್ರೆ. ನಮ್ಮ ಮನೇಲಿ ಇರೋದು ನಾನು, ಅಮ್ಮ, ತಮ್ಮ. ಇವರನ್ನ ಬಿಟ್ಟು ಬರೋಕೆ ಆಗಲ್ಲ. so ನಮ್ಮ ಮನೆಗೆ ಹೊಂದ್ಕೊಬೇಕು, ನನ್ನ best friend ಆಗಿರಬೇಕು, ಅರ್ಥ ಮಾಡ್ಕೊಬೇಕು.
She: ok.
Why was that ok? Was that to tell me that it is ok from her end? :) ...... Unlike what I thought as bossy nature in the beginning, this is what I observed in the short talk - She is caring nature, respect elders, family, soft in nature, ಅರ್ಥ ಮಾಡ್ಕೊಳೋ ಹುಡುಗಿ
Me: ಇನ್ನೇನಾದ್ರು ಕೇಳೋದು ಇದೆಯಾ?
She: ಇಲ್ಲ.
Me: ಸರಿ ಒಳಾಗಡೆ ಹೋಗೋಣ?
She: ಸರಿ ... with a smile
Damn .... I loved her smile 

Can she be mine? hundred of question passed in my head. It was almost ok from my side. But, still wanted to talk for some more time to know her more before saying yes. As we were ready to leave; I observed someone jumping inside the room. Oh, wait a second. It was not just one, it was two of them jumping to see me.

Praveen ಸ್ವಲ್ಪ ಈ ಕಡೆ ನಿಂತ್ಕೊಳಪ್ಪ - I heard aunty voice directed to me. Turned towards the voice. ರಂಗೋಲಿ, ಅಕ್ಕಿ ಹಿಟ್ಟಿಂದ ಹಾಕಿರೋದು ತುಳಿಬಾರ್ದು. I realized that I was standing on the ರಂಗೋಲಿ quickly moved away apologizing. When my mom came, we all bid adieu and left. I knew ಅಮ್ಮ and ಮಾಮ are gonna ask my opinion. Again, hundreds of questions crossed my mind while stepping down the stairs. We reached the car and her relatives were standing outside. Kumar uncle saw that those girls, who were jumping inside the room to see me, are also standing and asked me to show my face to them. I raised my head, smiled at them and stepped inside the case. As expected million dollar question came - "ಏನಪ್ಪಾ ನಿನ್ನ opinion-u?".

ಹುಡುಗಿ ಚೆನ್ನಾಗಿದಾಳೆ [ಸ್ವಲ್ಪ ಡುಮ್ಮಿ ಅಂತ ಮನಸ್ಸಿನಲ್ಲೇ ಅನ್ಕೊಂಡೆ :)], soft nature, respect ಕೊಡ್ತಾಳೆ. So far ಇಷ್ಟ ಆಗಿದ್ದಾಳೆ ಆದರೆ ಒಂದ್ಸಲ ಮಾತಾಡಬೇಕು ಅಂತ ಹೇಳಿದೆ. ಅಮ್ಮನಿಗೂ, ಮಾಮನಿಗೂ ಕೂಡ ಮಧು ಇಷ್ಟ ಆಗಿದ್ಲು. It was more or less yes from our end ಅಂತ kumar uncle-ಗೆ ಅಮ್ಮ ಹೇಳಿ ಅವರ ಮನೆ opinion ಕೂಡ ತಿಳ್ಕೊಳೋಕೆ ಹೇಳಿದ್ರು.

We left the place and I was all waiting to talk to her over the phone.



-To be continued

No comments: