ಎಂದೂ ಮುಗಿಯದ ಮಾತನು ಆಡುವ ಆಸೆ. ಹೇಗೆ ತಾನೇ ಸಾಧ್ಯ?
ಸುಮ್ಮನೆ ಜೊತೆ ಕೂತು ದೂರ ತೀರವ ನೋಡುವ ಆಸೆ. ಹೇಗೆ ತಾನೇ ಸಾಧ್ಯ?
ಮಡಿಲಲಿ ಮಲಗಿ ಕಳೆದೋಗುವ ಆಸೆ. ಹೇಗೆ ತಾನೇ ಸಾಧ್ಯ?
ತೋಳಲಿ ಬಳಸಿ ಭರವಸೆಯ ಪಡೆವ ಆಸೆ. ಹೇಗೆ ತಾನೇ ಸಾಧ್ಯ?
ಗುರಿಯ ಬೆನ್ನಟ್ಟಿ ಓಡುವ ಆಲೋಚನೆಗಳ ಸಾಕಾರಗೊಳಿಸುವ ಆಸೆ. ಹೇಗೆ ತಾನೇ ಸಾಧ್ಯ?
ಕನಸಲಿ ಬರುವ ಪ್ರಪಂಚವ ಕಟ್ಟುವ ಆಸೆ. ಹೇಗೆ ತಾನೇ ಸಾಧ್ಯ?
ಎಲ್ಲವೂ ಸಾಧ್ಯ - ಕೇಳುವ ಮನಸ್ಸೊಂದಿರಬೇಕು.
ಹೇಳಿಕೊಂಡರೆ ತಾನೇ ಕೇಳುವ ಮನಸ್ಸು ಸಿಗುವುದು ಎನ್ನುವರು.
ಅವರಿಗೇನು ಗೊತ್ತು - ಹೇಳಿಕೊಳ್ಳುವ ಹಾಗೆ ಚೌಕಟ್ಟು, ಪರಿಸರ, ಸಹನೆ ಇದ್ದರೆ; ಆಲೋಚನೆಯ ಅಲೆಗಳಲ್ಲಿ ಮುಳುಗವ ಭಯದಲ್ಲಿರುವ ಈ ಮನಸ್ಸಿಗೆ ಅದೇನೂ ಕಷ್ಟವಲ್ಲವೆಂದು.
No comments:
Post a Comment